Wednesday, July 23, 2008

ಒಂದು ಪ್ರತಿಕ್ರಿಯೆ...

ತೇಜಸ್ವಿನಿಯವರ
**ನನ್ನ-ನಿನ್ನ ನಡುವೆ**
ಒಲುಮೆಯ ಸಾಗರವಿದೆ
ನೋವ-ನಲಿವ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
ಕವನಕ್ಕೆ ಪ್ರತಿಕ್ರಿಯೆ:-
ಒಲುಮೆಯ ಸಾಗರವಿರುವುದಕೆ
ನೋವ-ನಲಿವ ಅಲೆಗಳೇಳುವುದು.
ಒಲುಮೆಯ ಸಾಗರವಿರುವುದಕೆ
ಮುತ್ತುಗಳು ಅರಳುವುದು.
ಒಲುಮೆಯ ಸಾಗರವಿರುವುದಕೆ
ಆಗಾಗ ಸುನಾಮಿಯೂ ಏಳುವುದು

ಆದ್ದರಿಂದಲೇ
ಅದಕ್ಕೆ ಒಲುಮೆಯೆನ್ನುವುದು!!


1 comment:

ತೇಜಸ್ವಿನಿ ಹೆಗಡೆ said...

ಸಿಮ್ಮಾ ಅವರೆ,

ನನ್ನ ಈ ತುಣುಕಿಗೆ ಸುಂದರವಾಗಿ ಹಾಗೂ ಅರ್ಥವತ್ತಾಗಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.