Wednesday, July 2, 2008

ಬಾ ಸುಮ್ಮನೇ.....

ಬಾ ಸುಮ್ಮನೇ,
ಬಾಗಿಲ ಅಗುಳಿ ಹಾಕು; ಮನದ ಬಾಗಿಲ ತೆರೆ.
ಮೈ ಮನವ ಹಗುರ ಗೊಳಿಸು,
ಹರಿಯಲಿ ಒಲವ ಧಾರೆ..!
ಯಾಕೀಗ ಮಾತುಗಳ ಗೊಡವೆ?
ಬೇಡ ಯಾವುದೇ ಪರಿವೆ,
ಹಾರಿ ಹೋಗಲಿ ಬಿಡು ಆ ಅರಿವೆ,
ಯಾಕೆಂದು ನೀ ಮುಂದೆ ಅರಿವೆ.
ಬಯಲಾಗು ಬೆತ್ತಲಾಗು ಮೈ ಮನ ಎರಡನ್ನೂ,
ಅಂಜಿಕೆ ನಾಚಿಕೆಯ ಗೊಡವೆಯೇಕೆ,
ಬೇಡ ಯಾವುದೇ ತೆರೆ,
ಪ್ರಣಯದ ಬಾಗಿಲು ತೆರೆ,
ಬಾ ನನ್ನೊಳಗೆ ನೀ ಮೊರೆ,
ಬರಲಿ ಒಲವ ನೆರೆ.
ಬಾ ನನ್ನೊಳಗೆ ಈಸು ಬೀಳು
ಏಕೆಂದರೆ, ಇಂದು ನಮ್ಮ ಮೊದಲಿರುಳು....!!!!
(ನಮ್ಮ ಮೊದಲಿರುಳಿಗೆಂದು ಬರೆದದ್ದು)

2 comments:

sunaath said...

ಮುಚ್ಚುಮರೆಯಿಲ್ಲದ ಬಿಚ್ಚುಕವನ.

ಸಿಮ್ಮಾ said...

ಅಯ್ಯೋ ಆ ಸಮಯದಲ್ಲಿ ಮುಚ್ಚುವುದೆಲ್ಲಾ ಮರೆತು ಹೋಗೋದಿಲ್ವ ಮಾರಾಯ್ರೆ....