(ಸುಮ್ಮನೇ ಬರೆದದ್ದು)
ಬರೆಯಲು ನೋವಾಗಲೇ ಬೇಕೇ?
ಹೇ... ಮನಸೇ..
ಏನಿದು ವಿಚಿತ್ರ..!
ಬರೆ ಬೀಳಲೇ ಬೇಕೇ
ನೀನು ಸಂವೇದನೆಗೊಳ್ಳಲು.
ವೇದನೆಯೇ ಸಂವೇದನೆಯ ಮೊಲವೇ?!
ಹೊಡೆತ ಬೀಳಲೇ ಬೇಕೇ
ನೀ ಎಚ್ಚರಗೊಳ್ಳಲು.
ನಿನ್ನನ್ನು ನೀ ಕಂಡು ಕೊಳ್ಳಲು.
ಗಾಯ ವೃಣವಾಗಿ ಕೀವಾಗಿ ಸೋರ ಬೇಕೇ,
ನಿನ್ನೊಳಗಿನ ೊರತೆ ಒರೆಯಲು.
ನಾ ಬಿದ್ದು ತೊಳಲಲೇ ಬೇಕೇ
ನಿನ್ನೊಳಗಿನ ದನಿ ಅರಳಲು!
ಅರಳಿ ನನ್ನೊಳಗೆ ನಾ ಮರಳಲು...
ಎಂತಹ ವಿಚಿತ್ರ...!!!
ಹೊರಟು ಹೋಗುತ್ತೇನೆ.......
16 years ago
1 comment:
'ಬರೆ'ಬಿದ್ದಾಗಲೇ ಬರೆಯಲು ಸಾಧ್ಯವಾಗುವದು, ಸಿಂಹರೆ!
Post a Comment