ಎಲ್ಲಾ ಹಬ್ಬಗಳಲ್ಲೂ ನಂಗೆ ಯುಗಾದಿಯೆಂದರೆ ತುಂಬಾ ಇಷ್ಟ. ಯಾಕೆ ಇಸ್ಪೀಟಾಡ್ಲಿಕ್ಕಾ ಅಂತ ಮಾತ್ರ ಕೇಳ್ಬೇಡ, ತೀರಾ ಜೂಜುಕೋರನೇನಲ್ಲ ನಾನು. ಚಿಗುರಿದ ಹಸಿರಿಗೆ, ಅರಳಿದ ಹೂವಿಗೆ, ಗುಂಯ್ ಗುಡುವ ದುಂಬಿಗಳ ದಾಳಿಗೀಡಾದ ಹೊಂಗೆಯ ಹೂವಿನ ಚೆಲುವಿಗೆ, ಬೇವಿನ ಹೂವ ಸಿಹಿ ಕಹಿಗೆ, ಪ್ರಕೃತಿಯ ನವ ಹುಟ್ಟಿಗೆ.......... ಹೀಗೆ ಇವೆಲ್ಲದಕ್ಕೂ ಸಾಕ್ಷಿಯಾಗುವ ಈ ಯುಗಾದಿಯೆಂದರೆ ನನಗಿಷ್ಟ.
ನಿನಗ್ಗೊತ್ತಾ ಹುಡುಗಿ ನಮ್ಮೂರಲ್ಲಿ ಯುಗಾದೀನ ಹೇಗೆ ಆಚರಿಸ್ತೀವಿ ಅಂತ..? ಊರು ಬಿಟ್ಟು ಎಲ್ಲೆಲ್ಲಿಯೋ ಹೋದವರಲ್ಲಾ ಯುಗಾದಿಗೆ ಮರಳಿ ಬಂದೇ ಬರ್ತಾರೆ, ಯುಗಾದಿಯ ಹಿಂದಿನ ರಾತ್ರಿಯೇ ನಮ್ಮೂರ ತುಂಬೆಲ್ಲಾ ಕುದಿವ ಎಣ್ಣೆಯ ಕಮಟು ಮೂಗಿಗಡರುತ್ತೆ. ರಾತ್ರಿಯಿಡೀ ಹೆಂಗಸರು ಕರಿಗಡುಬು ಮಾಡ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಅಭ್ಯಂಜನ, ನಂತರ ತೋರಣದ ತಯಾರಿ, ಮಾವು ಬೇವು ಪ್ರಧಾನ. ನಂತರ ಹತ್ತಿರದ ದೇವರ ಭೇಟಿ(ಕುಶಲೋಪರಿ ವಿಚಾರಿಸಲಿಕ್ಕಲ್ಲ. ಆದರೂ ಅದರಲ್ಲಿ ಎಷ್ಟೋ ದೇವರು ಅಂದು ಮಾತ್ರವೇ ಪೂಜೆ ಕಾಣುವ ಭಾಗ್ಯ ಪಡೆದಿರುವುದು ಎಂಬುದೂ ಸುಳ್ಳಲ್ಲ). ಇನ್ನೊಂದು ವಿಷ್ಯಾ ಗೊತ್ತಾ? ಆವತ್ತು ಮಧ್ಯಾಹ್ನ ನಮ್ಮೂರ ದಾಸಯ್ಯ ಬಂದು ಮನೆಯಲ್ಲಿ ಗೋವಿಂದ ಎನ್ನುವವರೆಗೂ ನಾವು ಊಟ ಮಾಡುವಂತಿಲ್ಲ. ಅದಕ್ಕೆ ಎಷ್ಟೋ ಜನ ದೇವರಿಗೆ ಹೋಗುವದುಂಟು; ಯಾಕೆಂದರೆ ಅಲ್ಲಿ ದೇವರ ಎಡೆಯ ಪ್ರಸಾದವಾದರು ಸಿಗುತ್ತಲ್ಲ. ಅದೂ ಅಲ್ಲದೇ ಊರವರೆಲ್ಲರೂ ಅಲ್ಲಿಗೆ ಬರುವುದರಿಂದ ಬಗೆಬಬಗೆಯ ಭಕ್ಷ್ಯ ಭೋಜ್ಯಗಳು......
ಹೊರಟು ಹೋಗುತ್ತೇನೆ.......
16 years ago
2 comments:
ನಮಸ್ಕಾರ, ಪತ್ರ ’ಅವಳಿಗಾಗಿ’ ಮಾತ್ರ ಇರ್ಬೋದು, ಆದ್ರೆ ನಾವು ಓದ್ಬೋದು ಅಲ್ವಾ? ;-)
ಏನ್ಮಾಡೋದು ಸ್ವಾಮಿ ಬ್ಲಾಗಿಗೆ ಬಾಗಿಲಿಲ್ಲ. ಇಲ್ಲಿ ಎಲ್ಲಾ ಖುಲ್ಲಂಖುಲ್ಲ. ನಾವು ನಾವು ಏನೋ ಮಾಡ್ಕೊಳ್ತಿದ್ರೂ ನಿಮ್ಮಂತವ್ರು ಹಣಿಕಿ ಹಾಕೋದ್ ಬಿಡೋದಿಲ್ವಲ್ಲ.
Post a Comment